ರಂಗ ಬಾರೋ ರಂಗ ಬಾರೋ
ರಾಗ: ಮೋಹನ;      ತಾಳ: ಅಟ್ಟ;

ರಂಗ ಬಾರೋ ರಂಗ ಬಾರೋ ರಂಗಯ್ಯ ಬಾರೋ
ಪೊನ್ನುಂಗುರ ನಿನಗೀವೆ ಪನ್ನಗಶಯನನೆ ಬಾರೋ ||೧||||ಪಲ್ಲವಿ||

ವೆಂಕಟರಮಣನೆ ಬಾರೋ ಪಂಕಜ ಚರಣವ ತೋರೋ
ಮುಕುಂದ ಮುಂದೆ ನಿಂದಾಡೋ ಕಿಂಕಿಣಿಕಿಣಿ ರವದಿಂದ ||೨||

ಕರ್ಣದೊಳಿಟ್ಟ ಮಾಗಾಯಿ ಹೊನ್ನ ಕದಪಿಲಿ ಧುಮುಕಾಡುತ್ತ
ಪನ್ನಗಶಯನನೆ ನಿನ್ನ ಚಿನ್ನದ ಸರ ಹೊಳೆವುತ್ತ ಬಾರೋ ||೩||

ಬಡನಡುವಿನ ಘಂಟೆ ಬಳುಕಿ ಢಣಢಣಿಸುತ್ತ
ಕಡಗ ಕಾಲಂದುಗೆ ಗೆಜ್ಜೆ ಅಡಿಗಡಿಗೆ ನುಡಿಸುತ್ತ ಬಾರೋ ||೪||

ಮುಂಗುರುಳಿನ ಸೊಬಗಿನಿಂದ ರಂಗ ನಿನ್ನ ಫಣೆಯೊಳಿಟ್ಟ
ರಂಗು ಮಾಣಿಕ್ಯದರಳೆಲೆ ತೂಗಿ ತೂಗಿ ಓಲಾಡುತ್ತ ಬಾರೋ || ೫ ||

ಕೊರಳಿಗಹಾಕಿದ ಹುಲಿಯುಗುರು ತೋರಮುತ್ತಿನ ಹಾರಂಗಳ್ಹೂಳೆಯುತ್ತ
ಪರಿಪರಿ ವಿಧಗಳಿಂದ ಪುರಂದರವಿಠಲ ಬಾರೋ             || ೩ ||ದಾಸವಾಣಿ
ರಚನೆ: ಪುರಂದರದಾಸರು.

ನೋಡಿ
+೧. ಪುರಂದರದಾಸರ ಸಾಹಿತ್ಯ
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುರಂದರದಾಸರು
ಪರಿವಿಡಿ

ಉಲ್ಲೇಖ
ವರ್ಗ: ಪುರಂದರದಾಸ ಸಾಹಿತ್ಯ
ವರ್ಗ: ದಾಸ ಸಾಹಿತ್ಯ